ನಮ್ಮ ಕರ್ನಾಟಕ ರಾಜ್ಯದ ಭವ್ಯ ಇತಿಹಾಸ, ಚರಿತ್ರೆ ಮತ್ತು ನಮ್ಮ ಶ್ರೀಮಂತ ಧೀಮಂತ ನಾನ್ನುಡಿಯಾದ ಕನ್ನಡ ಭಾಷೆ, ಅದರ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉದ್ಯಾನವನಗಳಲ್ಲಿ ಫಲಕಗಳು, ಧ್ವನಿ ಮುದ್ರಣಗಳು, ದೃಶ್ಯ ತುಣುಕುಗಳು, ಆಕೃತಿಗಳು, ಸ್ಮಾರಕಗಳು ಇವುಗಳ ಮೂಲಕ ಕನ್ನಡೇತರರನ್ನು ಒಳಗೊಂಡು ಉದ್ಯಾನವನವನ್ನು ಸಂದರ್ಶಿಸಲು ಬರುವ ಪ್ರತಿಯೊಬ್ಬರಿಗೂ ಪರಿಚಯ ಮಾಡುವ ನಿಟ್ಟಿನಲ್ಲಿ ಮೂಡಿರುವ ಯೋಜನೆಯು“ಕ-ವನ”ಅರ್ಥಾತ್“ಕನ್ನಡ-ವನ”.
ಉದ್ಯಾನವದಲ್ಲಿ“ಕ-ವನ” ಯೋಜನೆಯನ್ನು ಹೇಗೆ ಅನುಷ್ಠಾನ ಗೊಳಿಸಬಹುದೆಂದು ವಿಷಯಗಳನ್ನು ವಿಂಗಡಿಸಿ ವಿವರಿಸಲಾಗಿದೆ.
ಉದಾಹರಣೆಗೆ ಕರ್ನಾಟಕ ರಾಜ್ಯ ವನ ವನ್ನು ಉದ್ಯಾನವನದ ಒಂದು ಭಾಗದಲ್ಲಿ ನಿಯೋಜಿಸಿದಾಗ ಅದರ ಕೆಳಗೆ ತೋರಿಸಿರುವಂತಹ ವಿಷಯಗಳ ಬಗ್ಗೆ ಫಲಕಗಳು, ಧ್ವನಿಮುದ್ರಣಗಳು, ದೃಶ್ಯತುಣುಕುಗಳು, ಆಕೃತಿಗಳು, ಸ್ಮಾರಕಗಳಮೂಲಕತಿಳಿಸಿಕೊಡಬಹುದಾಗಿದೆ.
1. ಕರ್ನಾಟಕ ರಾಜ್ಯ ವನ
2. ಕನ್ನಡ ಭಾಷೆ ವನ
3. ಕರ್ನಾಟಕ ಕ್ರೀಡೆ ವನ
4. ಸಸ್ಯ ಮತ್ತು ಪ್ರಾಣಿ ವನ
5. ಕರ್ನಾಟಕ ಆಡಳಿತ ವನ
6. ಕಲೆ ಮತ್ತು ಸಂಸ್ಕೃತಿ ವನ
7. ಚಂದನವನ
8. ಕರ್ನಾಟಕ ಇತಿಹಾಸ ವನ
9. ಪಾಕಶಾಲೆ
10. ಕನ್ನಡ ಸಾಹಿತ್ಯ ವನ